Sakala Devatha Vedokta Shanti (Navagraha Shanti Poojas) - Kannada

ಜಯ ಗುರು ದತ್ತ

ಶ್ರೀಶ್ರೀಶ್ರೀಗಣಪತಿ ಸಚ್ಚಿದಾನಂದ ಸದ್ಗುರುಭ್ಯೋ ನಮಃ

ಶ್ರೀ ದತ್ತ ವಿಜಯಾನಂದತೀರ್ಥ ಗುರುಭ್ಯೋ ನಮಃ

ಸಕಲ ದೇವತಾ ವೇದೋಕ್ತ ಶಾಂತಿ

 

ಶ್ರೀ ಸದ್ಗುರುವಿನ ಕರುಣೆ ಅಪಾರ. ಸದ್ಗುರುಗಳು ಯಾವಾಗಲೂ, ತಮ್ಮ ಶಿಷ್ಯರು ಅವರ ಜೀವನದಲ್ಲಿ ಎಲ್ಲಾ ಸಮಸ್ಯೆಗಳಿಂದ ಹೊರಬಂದು, ಆಧ್ಯಾತ್ಮಿಕ ಮಾರ್ಗದಲ್ಲಿ ಸುಲಭವಾಗಿ ನಡೆಯುವಂತೆ ನಿರ್ದೇಶಿಸುತ್ತಾರೆ. ಅಂತಹ ಸಮಸ್ಯೆಗಳನ್ನು ದೂರ ಮಾಡುವ, ಧರ್ಮಯುಕ್ತವಾದ ಕೋರಿಕೆಗಳನ್ನು ನೆರವೇರಿಸುವ ವೈದಿಕ ಕರ್ಮಾಚರಣೆಗಳನ್ನು ನಮ್ಮೆಲ್ಲರಿಗೋಸ್ಕರ ಪರಮ ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರೇ ಸ್ವತಃ ಆಚರಿಸುವ ಮೂಲಕ ನಮ್ಮ ಧರ್ಮಶ್ರದ್ಧೆಯನ್ನು ವೃದ್ಧಿಪಡಿಸುತ್ತಿದ್ದಾರೆ.

 

 ಪ್ರಸ್ತುತ ಇಡೀ ವಿಶ್ವವೇ ಭಯಭೀತಗೊಂಡಿರುವ ‘ಕರೋನಾ’ ಸಮಯದಲ್ಲಿ, ಭಕ್ತಾದಿಗಳು ತಮ್ಮ ಅವಶ್ಯಕತೆಗೆ ಅನುಗುಣವಾಗಿ, ತಮ್ಮ ತಮ್ಮ ಹುಟ್ಟಿದ ದಿನಾಂಕಗಳಲ್ಲಿ, ಹಬ್ಬದ ದಿನಗಳಲ್ಲಿ, ಇತರ ವಿಶೇಷ ದಿನಗಳಲ್ಲಿ ನವಗ್ರಹ ಶಾಂತಿ, ಇತ್ಯಾದಿ ವೈದಿಕ ಕೈಂಕರ್ಯಗಳನ್ನು ತಾವು ಪ್ರಪಂಚದ ಯಾವುದೇ ಮೂಲೆಯಲ್ಲೇ ಇದ್ದರೂ ಸದ್ಗುರು ಸನ್ನಿಧಿಯಲ್ಲಿ, ಮೈಸೂರು ಆಶ್ರಮದಲ್ಲಿ ಆಚರಿಸಿಕೊಳ್ಳಬಹುದಾದ ಯೋಜನೆಯನ್ನು ರೂಪಿಸಿದ್ದಾರೆ.

 

ಸೇವಾಕರ್ತರು ತಾವು ಭಾಗವಹಿಸುವ ವೈದಿಕ ಕಾರ್ಯಕ್ರಮಗಳನ್ನು ದತ್ತಪೀಠದ ವಿದ್ವಾಂಸರು ನೆರವೇರಿಸಲಿದ್ದು, ಅದನ್ನು ‘ಆನ್ ಲೈನ್’ ಮೂಲಕ  ಸ್ವಯಂ ವೀಕ್ಷಿಸುವ ಏರ್ಪಾಟನ್ನೂ ಪೂಜ್ಯ ಸ್ವಾಮೀಜಿಯವರು ಮಾಡಿದ್ದಾರೆ. ಯಾರು ಈ ಪ್ರಕಾರವಾಗಿ ಆಶ್ರಮದಲ್ಲಿ ನೆರವೇರಿಸಿಕೊಳ್ಳುತ್ತಾರೋ, ಅವರ ಕಾರ್ಯಕ್ರಮದ ಉದ್ದೇಶಗಳನ್ನು ಹಾಗೂ ಪ್ರಾರ್ಥನೆಗಳನ್ನು ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ ಹಾಗೂ ಶ್ರೀದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರಿಗೆ ತಿಳಿಸಿ ಸೇವಾಕರ್ತರ ಪರವಾಗಿ ಪುಷ್ಪಮಾಲೆಯನ್ನು ಸಮರ್ಪಿಸಲಾಗುವುದು. ಪೂಜ್ಯ ಅಪ್ಪಾಜಿ ಮತ್ತು ಸ್ವಾಮೀಜಿಯವರು ಆ ದಿನ ಬೇರೆ ಊರಿನಲ್ಲಿ ಇದ್ದರೂ, ನಿಮ್ಮ ಕಾರ್ಯಕ್ರಮದ ವಿವರಗಳನ್ನು ತಿಳಿಸಬೇಕೆಂದು ಪೂಜ್ಯ ಅಪ್ಪಾಜಿಯವರು ಅಪ್ಪಣೆ ಮಾಡಿರುತ್ತಾರೆ.

 

 

ಕೈಂಕರ್ಯಗಳ ವಿವರಗಳು  ಮತ್ತು ವೆಚ್ಚ

  1. ಗಣಪತಿ ಹೋಮ - ರೂ. 3,500/-
  2. ನವಗ್ರಹ ಹೋಮ - ರೂ.4,000/-
  3. ನಕ್ಷತ್ರ ಹೋಮ - ರೂ.3,000/-
  4. ಆಯುಷ್ಯ ಹೋಮ - ರೂ.5,000/-
  5. ಮೃತ್ಯುಂಜಯ ಹೋಮ - ರೂ.5,000/-
  6. ಬಾಲಾರಿಷ್ಟ ಹೋಮ - ರೂ.5,000/-
  7. ಸುದರ್ಶನ ಯಾಗ - ರೂ.5,000/-
  8. ಚಂಡೀ ಯಾಗ  - ರೂ.15,000/- (ಅಷ್ಟಮಿ, ನವಮಿ, ಚತುರ್ದಶಿ, ಪೌರ್ಣಮಿ, ದಿನಗಳಲ್ಲಿ ಮಾತ್ರ)
  9. ಲಕ್ಷ್ಮೀಕುಬೇರ ಹೋಮ - ರೂ.5,000/-
  10. ಮಹಾನ್ಯಾಸಪೂರ್ವಕ ರುದ್ರಾಭಿಷೇಕ - ರೂ.7,500/-
  11. ಇಷ್ಟದೇವತಾ ಪೂಜೆ - ರೂ.2,000/-
  12. ಜನ್ಮದಿನ ಸ್ತೂಪ ಪೂಜೆ - ರೂ.1,500/-
  13. ಸತ್ಯನಾರಾಯಣ ವ್ರತ - ರೂ.3,000/-
  14. ಜ್ಯೇಷ್ಠಾದೇವೀವ್ರತ - ರೂ.2,000/-
  15. ಹನುಮತ್ ವ್ರತ - ರೂ.3,000/-
  16. ದುರ್ಗಾದೀಪ ಪೂಜೆ - ರೂ.3,500/-
  17. ಸುಂದರಕಾಂಡ ಪಾರಾಯಣ - ರೂ.5,000/-
  18. ಮನ್ಯುಸೂಕ್ತ ಪಾರಾಯಣ - ರೂ.2,000/-
  19. ತ್ರಿಚವಿಧಾನ ಸೂರ್ಯನಮಸ್ಕಾರ - ರೂ.5,000/-
  20. ಸರ್ಪಶಾಂತಿ  - ರೂ.7,000/-
  21. ಆಶ್ರೇಷಬಲಿ ಪೂಜೆ (ಆಶ್ರೇಷ ನಕ್ಷತ್ರ ದಿನದಂದು ಮಾತ್ರ) - ರೂ.10,000/-
  22. ಉದಕಶಾಂತಿ - ರೂ.9,000/-
  23. ಅನಘಾಷ್ಟಮಿ - ರೂ.3,000/-
  24. ವೇದವಿದ್ಯಾರ್ಥಿಗಳಿಗೆ ಒಂದು ದಿನದ ಅನ್ನದಾನ - ರೂ.32,000/-

 

ಸಂಪೂರ್ಣ ನವಗ್ರಹ ಶಾಂತಿ

ಗ್ರಹ                    ವೆಚ್ಚ

ರವಿ                     ರೂ.10,500/-

ಚಂದ್ರ                  ರೂ.12,500/-

ಕುಜ                    ರೂ.10,500/-

ಬುಧ                   ರೂ.15,500/-

ಗುರು                  ರೂ.15,500/-

ಶುಕ್ರ                   ರೂ.17,500/-

ಶನಿ                     ರೂ.17,000/-

ರಾಹು                  ರೂ.17,000/-

ಕೇತು                  ರೂ.10,500/-

 

 

ಕೈಂಕರ್ಯಗಳ ವಿವರಗಳು ಮತ್ತು ಫಲಗಳು

  1. ಗಣಪತಿ ಹೋಮ - ವಿದ್ಯೆ, ಉದ್ಯೋಗ, ವ್ಯಾಪಾರ, ಸಕಲ ಕಾರ್ಯಾರಂಭಕ್ಕೆ, ಸರ್ವವಿಘ್ನ ನಿವಾರಣೆಗೆ                          
  2. ನವಗ್ರಹ ಹೋಮ - ಗ್ರಹಬಾಧೆಗಳ ವಿಮೋಚನೆಗೆ
  3. ಆಯುಷ್ಯ ಹೋಮ - ಹುಟ್ಟಿದ ದಿನಾಂಕಕ್ಕೆ                                          
  4. ಮೃತ್ಯುಂಜಯ ಹೋಮ - ಅಕಾಲಮೃತ್ಯುಭಯ ನಿವಾರಣೆಗೆ
  5. ಬಾಲಾರಿಷ್ಟ ಹೋಮ - ಸಣ್ಣ ಮಕ್ಕಳ ಆರೋಗ್ಯಕ್ಕಾಗಿ
  6. ಸುದರ್ಶನ ಯಾಗ - ಶತ್ರುಬಾಧಾ ನಿವಾರಣೆಗೆ
  7. ಚಂಡೀ ಯಾಗ - ವಿಜಯಪ್ರಾಪ್ತಿಗೆ
  8. ಲಕ್ಷ್ಮೀಕುಬೇರ ಹೋಮ - ಐಶ್ವರ್ಯಪ್ರಾಪ್ತಿಗೆ
  9. ಮಹಾನ್ಯಾಸಪೂರ್ವಕ ರುದ್ರಾಭಿಷೇಕ - ಶಿವಪ್ರೀತ್ಯರ್ಥಂ
  10. ಜನ್ಮದಿನ ಸ್ತೂಪ ಪೂಜೆ - ಆಶ್ರಮದಲ್ಲಿ ಪ್ರತಿಷ್ಠಾಪಿಸಿರುವ ಜನ್ಮದಿನ ಸ್ತೂಪದೇವತೆಗೆ
  11. ಜ್ಯೇಷ್ಠಾದೇವೀವ್ರತ - ದಾರಿದ್ರ್ಯ ನಿವಾರಣೆಗೆ
  12. ಹನುಮತ್ ವ್ರತ - ಸಕಲ ಶುಭಫಲಗಳಿಗೆ
  13. ದುರ್ಗಾದೀಪ ಪೂಜೆ - ಸಕಲ ಭಯ ನಿವಾರಣೆಗೆ
  14. ಸುಂದರಕಾಂಡ ಪಾರಾಯಣ - ನರದೃಷ್ಟಿ, ಇತರ ಪೀಡಾ ನಿವಾರಣೆಗೆ (bad vibrations)
  15. ಸರ್ಪಶಾಂತಿ - ಸರ್ಪದೋಷ ನಿವಾರಣೆಗೆ
  16. ಆಶ್ರೇಷಬಲಿ ಪೂಜೆ - ಸರ್ಪದೇವತಾ ಪ್ರೀತ್ಯರ್ಥಂ, ಸಮಸ್ತ ರೋಗ ನಿವಾರಣೆಗೆ

 

ಜಾತಕ ರೀತ್ಯಾ ದೋಷನಿವಾರಣಾ ಶಾಂತಿಗಳು

 

ನಿಮ್ಮ ಜಾತಕವನ್ನು ವಿವರವಾಗಿ ಪರಿಶೀಲಿಸಿ, ಅದಕ್ಕೆ ತಕ್ಕಂತೆ ಗ್ರಹ ಜಪ, ಹೋಮ, ತರ್ಪಣ, ದಾನಗಳೊಂದಿಗೆ ಶಾಂತಿ ಕರ್ಮಗಳನ್ನು ನೆರವೇರಿಸಲಾಗುವುದು.

 

ಸೇವಾಕರ್ತರಿಗೆ ಶ್ರೀದತ್ತ ವಿಜಾಯನಂದ ತೀರ್ಥ ಸ್ವಾಮೀಜಿಯವರ ಸೂಚನೆಗಳು

  1. ಮೈಸೂರು ಆಶ್ರಮದಲ್ಲಿ ನಿಮ್ಮ ಪರವಾಗಿ ಪೂಜೆಗಳು ನಡೆಯುವ ದಿನ ತಲೆಸ್ನಾನ ಮಾಡಬೇಕು. ಅಂದಿನ ಪೂಜಾವಿಧಿಗಳು ಮುಗಿಯುವವರೆಗೂ ಉಪವಾಸ ಇರುವುದು ಉತ್ತಮ ಫಲದಾಯಕವಾಗಿರುತ್ತದೆ.
  2. ವಿದೇಶೀ ಸೇವಾಕರ್ತರು, ಅನುಕೂಲಕ್ಕೆ ತಕ್ಕಂತೆ, ಕಾರ್ಯಕ್ರಮ ಪ್ರಾರಂಭವಾಗುವುದಕ್ಕೆ ಮುಂಚೆ ಅಥವಾ ಅವರವರ ಸ್ಥಳದ ಸಮಯಕ್ಕನುಸಾರವಾಗಿ ಅದರ ಮಾರನೆಯ ದಿನ ಸೂರ್ಯೋದಯದಲ್ಲಿ ತಲೆಸ್ನಾನ ಮಾಡಿ ಉಪವಾಸ ಮಾಡಬೇಕು.
  3. ನಿಮ್ಮ ಪೂಜಾ ಕಾರ್ಯಕ್ರಮಗಳನ್ನು ನೊಂದಾಯಿಸಿಕೊಳ್ಳುವುದಕ್ಕೆ ಮುಂಚೆ ಈ ಕೆಳಗೆ ಸೂಚಿಸಿರುವ ದೂರವಾಣಿ ಸಂಖ್ಯೆಯ ಮೂಲಕ ಪುರೋಹಿತರನ್ನು ಸಂಪರ್ಕಿಸಿ, ಇತರ ವಿವರಗಳನ್ನು ತಿಳಿದುಕೊಳ್ಳಬೇಕು.
  4. ಒಂದು ವೇಳೆ ಯಾರಾದರೂ ರೋಗಿಗಳಿಗಾಗಿ ಅಥವಾ ಮಕ್ಕಳಿಗಾಗಿ ಈ ಕಾರ್ಯಕ್ರಮವನ್ನು ಮಾಡಿಸುತ್ತಿದ್ದರೆ ಮೇಲಿನ ಸೂಚನೆಗಳನ್ನು ಪುರೋಹಿತರ ನಿರ್ದೇಶನದಂತೆ ಸಡಿಲಿಸಿಕೊಳ್ಳಬಹುದು.
  5. ನೀವು ನೊಂದಾಯಿಸಿಕೊಳ್ಳುವ ಯಾವುದೇ ಕೈಂಕರ್ಯವಾದರೂ, ಭಾರತ ದೇಶದ ಕಾಲಮಾನದ ಪ್ರಕಾರ ತಿಥಿ, ವಾರ, ನಕ್ಷತ್ರ, ದಿನಾಂಕಗಳನ್ನು ಅನುಸರಿಸಿ ನಿರ್ವಹಿಸಲಾಗುವುದು.
  6. ಈ ಎಲ್ಲಾ ವೈದಿಕ ಕಾರ್ಯಕ್ರಮಗಳೂ ಅವಧೂತ ದತ್ತಪೀಠ ಟ್ರಸ್ಟ್ ಮೂಲಕ ಮಾತ್ರವೇ ನಿರ್ವಹಿಸಲ್ಪಡುತ್ತದೆ.
  7. ಈ ವೈದಿಕ ಕಾರ್ಯಕ್ರಮಗಳನ್ನು ಅವಧೂತ ದತ್ತಪೀಠದಲ್ಲೇ ಮಾಡಿಸಲು ಇಚ್ಛಿಸುವವರು ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಮಾತ್ರವೇ ಸಂಪರ್ಕಿಸಬೇಕು.

 

Contact:

Kalyan Kiran Sharma – 9880304350
Chakravarthy Sharma - 9972134324

 

Please note: All seva amounts are listed in INR (Indian Rupees)